Wednesday, April 21, 2010
ನನ್ನಾಕೆ
ಲೇಖನ ಹೇಗೆ ಶುರು ಮಾಡಬೇಕೆಂಬುದೇ ಗೊತ್ತಾಗುತ್ತಿಲ್ಲ.
ಎಲ್ಲರೂ ಮದುವೆ ಯಾಗುತ್ತಾರೆಂದು ನಾನೂ ಮದುವೆಯಾದೆ...........
ಇವತ್ತು ಮಧ್ಯಾನ್ಹ ಉಟಕ್ಕೆ ಆಫೀಸಿಗೆ ಒಣ ಖಾರಪುಡಿ ಬಿಳಿ ಅನ್ನ ಬುತ್ತಿ ಕಟ್ಟಿದ್ದಳು. ಹಾಗಾಗಿ ಮನಸು ಒಂಥರಾ ಬೇಜಾರಲ್ಲಿದೆ,ಇನ್ನೊಂದ್ಸಲ ಬಿಡುವಿದ್ದಾಗ ಬರೀತೀನಿ. ಅಂದಂಗೆ ನನಗೆ ಶಾರ್ಟ್ ಮೆಮೊರಿ ಕೂಡ ಇದೆ ಎಷ್ಟು ನೆನಪಿರುತ್ತೋ ಅಷ್ಟು ಬರೀತೀನಿ ಸರಿನಾ ?
ನನ್ನಾಕೆಗೆ ನಾನೆಂದರೆ ಪ್ರೀತಿಯೇ ಇಲ್ಲವೇನೋ....? ಇಷ್ಟವೇ ಇಲ್ಲವೇನೋ .....? ಇದ್ದಿದ್ದರೆ ನನ್ನ ಉಟ ತಿಂಡಿಯ ಬಗ್ಗೆ ಒಳ್ಳೆ ಗಮನ ಕೊಡುತ್ತಿದ್ದಳು. ಎಲ್ಲರ ಹೆಂಡತಿಯರು ಹೀಗೆಯೇ ಇರುತ್ತಾರೆಯೇ ? ಹೌದಾದರೆ... ಎಲ್ಲ ನನ್ನ ಆತ್ಮಿಯ ಗೆಳೆಯರೇ ನೀವೆಲ್ಲ ಮದುವೆಯಾಗಬೇಡಿ, ನನಗೆ ಬಂದ ಕಷ್ಟ ನಿಮಗಾರಿಗೂ ಬರುವುದು ಬೇಡ.ನನ್ನ ಕಥೆ ಇವತ್ತೊಂದೇ ದಿನದ್ದಲ್ಲ. ಪ್ರತಿ ದಿನ ನಾ ಅನುಭವಿಸುವ ಕಷ್ಟ ಕಾರ್ಪಣ್ಯದ ತುಣುಕುಗಳನ್ನು ಇಲ್ಲಿ ಬಿಚ್ಚಿಡುತ್ತೇನೆ ನೀವೇ ನೋಡಿ. ಸಮಾಧಾನಗಳಿಗೆ ಸ್ವಾಗತ.
ಸಾವಿನ ದಾರಿ ಕಾಯುತ್ತ ಸಮಯ ಕಳೆಯುತ್ತಿರುವ ನಿನ್ನವ.
Subscribe to:
Post Comments (Atom)
No comments:
Post a Comment